ಕನ್ನಡ ಸಂಘ ಹಾಂಗ್ ಕಾಂಗ್ ಬಗ್ಗೆ


ನಮ್ಮಬಗ್ಗೆ

ಕನ್ನಡ ಸಂಘ, ಹಾಂಗ್ ಕಾಂಗ್ (KSHK) ,ಕರ್ನಾಟಕ/ಕನ್ನಡ ಸಮುದಾಯವನ್ನು ಪ್ರತಿನಿಧಿಸುವ ಒಂದು ಲಾಭರಹಿತ ಸಂಸ್ಥೆಯಾಗಿದೆ. ಇದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ. ಈ ಸಂಸ್ಥೆಯ ಉದ್ದೇಶ ಕನ್ನಡಿಗರ ನಡುವೆ ಕರ್ನಾಟಕ ಸಂಸ್ಕೃತಿ, ಕನ್ನಡ ಭಾಷೆ ಮತ್ತು ಕಲಾಪ್ರಕಾರಗಳನ್ನು ಪ್ರಚಾರ ಮಾಡುವುದು. ಬಹುಶಃ KSHK ಸಂಪೂರ್ಣ ಗ್ರೇಟರ್ ಚೀನಾ ಭೌಗೋಳಿಕದಲ್ಲೇ ಮೊದಲ ಕನ್ನಡ ಸಂಸ್ಥೆಯಾಗಿದೆ! KSHK ಈಗಾಗಲೇ ಕೆಲವು ವರ್ಷಗಳಿ೦ದ ಸಕ್ರಿಯವಾಗಿ ಕಾರ್ಯ ನೆರ್ವಹಿಸುತ್ತಿದೆ.


ಕನ್ನಡ ಸಂಘ ಹಾಂಗ್ ಕಾಂಗ್ ಕಥೆ

ಹಾಂಗ್ ಕಾಂಗ್ ನಲ್ಲಿ ಕನ್ನಡಿಗರ ಸಮುದಾಯ ಯಾವಾಗಲೂ ಯುಗಾದಿ ಆಚರಿಸಲು ಅಥವಾ ಪಿಕ್ನಿಕ್ ಹೋಗಲು ಒ೦ದಾಗಿ ಸೇರುತಿತ್ತು. ಆದರೆ, ಈ ಚಟುವಟಿಕೆಗಳನ್ನು ಒಂದು ರಚನಾತ್ಮಕವಾಗಿ ಮಾಡಲು ಯಾವುದೇ ಮೂಲಭೂತ ಸಂಸ್ಥೆಯಾಗಲಿ, ವೇದಿಕೆಯಾಗಲಿ ಇರಲಿಲ್ಲ. 2004 ರ ಶರತ್ಕಾಲದಲ್ಲಿ ಒಂದು ಗುಂಪು ತೈ ಕೂ ಶಿಂಗ್ ರೈಲು ನಿಲ್ಧಾಣದಲ್ಲಿ ಕಾಫಿಗೆ ಭೇಟಿಯಾಗಿ, ಒಂದು ಕನ್ನಡ ಸಂಘ ಸ್ಥಾಪನೆಗಯ ಬಗ್ಗೆ ವಿಮಶ್ರಿಸಿತು. ಪರಿಣಾಮವಾಗಿ ಜನವರಿ 2005 ರಲ್ಲಿ ಕನ್ನಡ ಸಂಘ ಹಾಂಗ್ ಕಾಂಗ್ ಸ್ಥಾಪನೆ ಆಯಿತು.


ಸಂಘದ ವಿನಮ್ರ ಪ್ರಾರ೦ಭದಲ್ಲಿ ಸಣ್ಣ ಸದಸ್ಯತ್ವ ಕ೦ಡಿತು. ಆದರೆ ಸಂಘ ಯಾವಾಗಲೂ, ಕನ್ನಡ ಸಂಸ್ಕೃತಿಯ ಹರಡುವಿಕೆ ಮತ್ತು ಬೆಳೆವಣಿಗೆಯನ್ನು ತಮ್ಮ ಧ್ಯೇಯವಾಗಿಟ್ಟುಕೊ೦ಡ ಅಮೋಘವಾದ ಸದಸ್ಯರನ್ನು ಹೊ೦ದಿತ್ತು. ಆದ್ದರಿ೦ದ ಸಂಘ ಯಾವಾಗಲೂ ಪ್ರತಿ ವರ್ಷ ಹೊಸ ಅಧ್ಯಕ್ಷರನ್ನು ಚುನಾಯಿಸುತ್ತಿರುವುದು ಆಶ್ಚರ್ಯವೇನಲ್ಲ. ಈ ವರ್ಷಗಳಲ್ಲಿ ಕನ್ನಡಿಗರನ್ನು ಹುಡುಕುವ ಮತ್ತು ಒಟ್ಟಿಗೆ ತರುವ ಸವಾಲಿನಿ೦ದ ಆರಂಭಗೊಂಡು, ಸಂಘದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದತ್ತಿ ಚಟುವಟಿಕೆಗಳು ಮತ್ತು ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸುವವರೆಗೂ ಸಂಘದ ಸಾಧನೆಗಳು ಗಮನಾರ್ಹವಾಗಿವೆ.


ಕೆಲವು ಮೈಲಿಗಲ್ಲುಗಳು:

  • ಏಪ್ರಿಲ್, 2006: ಸಂಘದ ವತಿಯಿ೦ದ ಮೊದಲ ಕನ್ನಡ ಚಲನಚಿತ್ರ "ಅಮೃತ ಧಾರೆ", ನಿರ್ದೇಶಕ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆ, ಹಾಂಗ್ ಕಾಂಗ್ ನಲ್ಲಿ ಪ್ರದರ್ಶಿಸಲಾಯಿತು.
  • ಮೇ 2006: ಹಿನ್ನೆಲೆ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಮತ್ತು ಹಾಸ್ಯನಿಪುಣ ಶ್ರೀ ಕೃಷ್ಣ ಗೌಡ ಅವರಿಗೆ ಸಂಘದ ಮೊದಲ ಆಮಂತ್ರಣ.
  • ನವೆಂಬರ್ 2006: ಶ್ರೀ ಅರಳು ಮಲ್ಲಿಗೆ ಪಾರ್ಥಸಾರಥಿಯವರಿ೦ದ ದಾಸ ಸಾಹಿತ್ಯ ಉಪನ್ಯಾಸ ಸಂಘಟಿಸುವ ಮೂಲಕ ದಾಸ ಸಾಹಿತ್ಯಕ್ಕೆ ಸಂಘದ ಮೊದಲ ಗೌರವ.
  • ಫೆಬ್ರವರಿ 2007: ಪ್ರಖ್ಯಾತ ರಂಗಕರ್ಮಿ ಶ್ರೀ ಸುಬ್ರಾಯ ಭಟ್ ಅವರಿ೦ದ ಸಂಘವು ಮೊದಲ ನಾಟಕ ಕಾರ್ಯಾಗಾರವನ್ನು ಆಯೋಜಿಸಿತು.

KSHKಯ ಮೊದಲ ಪದಾಧಿಕಾರಿಗಳಿ೦ದ ಸಂಸ್ಥೆಯ ಉದ್ದೇಶಗಳ ಬಗ್ಗೆ ಈ ವೀಡಿಯೊ (ವರ್ಷ 2006), ವೀಕ್ಷಿಸಿ:


ನಮ್ಮಧ್ಯೇಯ


ಕನ್ನಡ ಸಂಘ ಹಾಂಗ್ ಕಾಂಗ್ ಈ ಕೆಳ ಕಂಡ ಧ್ಯೇಯದೊಂದಿಗೆ ಸ್ಥಾಪಿತ ಗೊಂಡಿರುತ್ತದೆ:

  • ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ವರ್ಧಿಸಿ, ಪ್ರಚಾರಗೊಳಿಸಿ ಎಲ್ಲೆಡೆ ಪಸರಿಸುವುದು
  • ಸಂಘದ ಸದಸ್ಯರುಗಳು ಹಾಗೂ ಜನ ಸಾಮನ್ಯರಿಗಾಗಿ ಸಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ, ಕ್ರೀಡೆ ಹಾಗೂ ಇನ್ನಿತರ ಲಾಭದಾಯಕವಲ್ಲದ ಚಟುವಟಿಕೆಗಳನ್ನು ಆಯೋಜಿಸುವುದು
  • ದತ್ತಿಕಾರ್ಯಕ್ರಮಗಳು, ಉದಾಹರಣೆಗೆಬಡತನಪರಿಹಾರ, ಶೈಕ್ಷಣಿಕ ಪ್ರಗತಿ ಹಾಗೂ ಇತರೆ ಸಮುದಾಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು.
  • ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತ ಹಾಗೂ ಸಮರ್ಥ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು
  • ನಿಯತಕಾಲಿಕಗಳು, ಸುತ್ತೋಲೆಗಳುಹಾಗೂಇತರೆ ಸಂಘದ ಆಸಕ್ತಿಗಳನ್ನು ಪ್ರಚಾರಿಸುವ ಸಾಹಿತ್ಯಗಳನ್ನು ತಯಾರಿಸಿ ಮುದ್ರಿಸಿ ಸಂಘದ ಸದಸ್ಯರಿಗೆ ಹಾಗೂ ಇನ್ನಿತರ ಆಸಕ್ತರಿಗೆ ತಲುಪಿಸುವುದು
  • ಸದೃಶ ಅಸಕ್ತಿ ಹೊಂದಿರುವ ಇತರ ಸಂಘಗಳೊಂದಿಗೆ ಮೈತ್ರಿ ಬೆಳೆಸಿ ಕಾರ್ಯ ನಿರ್ವಹಿಸುವುದು
  • ಸದಸ್ಯತ್ವ ಶುಲ್ಕ ಹಾಗೂ ಇನ್ನಿತರ ಕೊಡುಗೆಕಳ ವಿವರಗಳನ್ನು ಸಂಗ್ರಹಿಸಿ ಖಾತೆಗಳನ್ನು ಪ್ರಮಾಣಿಕವಾಗಿ ಕಾಯ್ದುಕೊಳ್ಳುವುದು
  • ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕನ್ನಡಿಗರಿಗೆ ವೇದಿಕೆಯನ್ನು ಒದಗಿಸುವುದು.
  • ಹಾಂಗ್ ಕಾಂಗ್ ನಲ್ಲಿ ಹೊಸ ಕನ್ನಡ ಸದಸ್ಯರಿಗೆ ಅಗತ್ಯ ಸ್ಥಳೀಯ ಮಾಹಿತಿಯೊಂದಿಗೆ ಸಹಾಯ.


ಡೌನ್ಲೋಡ್ಗಳು



KSHK ಕೈಪಿಡಿಯ ಚಿತ್ರಗಳು ಮತ್ತು ಪಿಡಿಎಫ್